ಬೆಂಗಳೂರು : ಡ್ರಗ್ಸ್ ಕೇಸ್ ವಿಚಾರವಾಗಿ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿರು ನಟಿಯರಾದ ಸಂಜನಾ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಕೂಡಲೇ ಜಾಮೀನು ನೀಡಿ ಇಲ್ಲದಿದ್ದರೆ ಬಾಂಬ್ ಹಾಕುವುದಾಗಿ ಎಚ್ಚರಿಕೆಯ ಪತ್ರವೊಂದು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಪತ್ರ ಬಂದಿದೆ.
ಸಂಜನಾ ಮತ್ತು ರಾಗಿಣಿ ಅವರಿಗೆ ಜಾಮೀನು ನೀಡಿ ಮತ್ತು ಕೆ.ಜಿ ಹಳ್ಳಿ – ಡಿ.ಜೆ ಹಳ್ಳಿ ಪ್ರಕರಣದಿಂದ ಹಿಂದೆ ಸರಿಯಿರಿ ಎಂದು ಬೆದರಿಕೆ ಪತ್ರ ಬಂದಿದ್ದು, ಪತ್ರದ ಒಳಗೆ ಬಾಂಬ್ ಇಡಲಾಗಿದೆ ಎಂದು ಬರೆದಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಕವರ್ ತೆರದು ನೋಡಿದೆ. ಕವರ್ ನಲ್ಲಿ ಬಂಡೆ ಒಡೆಯುವ ಡಿಟೋನೇಟರ್ ಪತ್ತೆಯಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ.
ತುಮಕೂರು ಕಡೆಯಿಂದ ಹಲವು ಸ್ಥಳಗಳಿಗೆ ಪತ್ರ ರವಾನೆಯಾಗಿದ್ದು ಸಿಸಿಬಿ ಡಿಸಿಪಿ ರವಿಕುಮಾರ್ ಮತ್ತು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೂ ಬೆದರಿಕೆ ಪತ್ರ ಬಂದಿದ್ದು, ಡ್ರಗ್ಸ್ ಕೇಸ್ ತನಿಖೆ ನಿಲ್ಲಿಸಿ ಎಂದು ಪತ್ರದಲ್ಲಿ ಎಚ್ಚರಿಕೆ ನೀಡುವ ಸಂದೇಶ ಬಂದಿದೆ ಎಂದು ಹೇಳಲಾಗಿದೆ.
ಇನ್ನು ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ವಿಚಾರವಾಗಿ ಇದೀಗಗಾಲೇ 15 ಮಂದಿ ಅರೆಸ್ಟ್ ಆಗಿದ್ದಾರೆ . ಇಂತಹ ಸಮಯದಲ್ಲಿ ಬೆದರಿಕೆ ಕರೆ ಬಂದಿದ್ದು ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುದ್ದಾರೆ.