ತುಮಕೂರು: ನವೆಂಬರ್ 3ರಂದು ಶಿರಾ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 15ಕ್ಕೆ ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದ್ದು, ಕಾಂಗ್ರೆಸ್ ಈಗಾಗಲೇ ಟಿ.ಬಿ ಜಯಚಂದ್ರ ಅವರನ್ನ ಫೈನಲ್ ಅಭ್ಯರ್ಥಿಯನ್ನಾಗಿಸಿದೆ. ಇನ್ನುಳಿದಂತೆ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನ ಘೋಷಿಸಬೇಕಿದೆ. ಈ ಬೆನ್ನಲ್ಲೇ ಶಿರಾಗೆ ಹೊಸ ವ್ಯಕ್ತಿ ಸ್ಪರ್ಧಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಹೌದು, ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಶಿರಾ ಉಪಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದ್ದಾರೆ. ಆದ್ರೆ ಯಾವ ಪಕ್ಷದಿಂದ ನಿಲ್ಲುತ್ತಾರೆಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾತನಾಡಿರುವ ದಿವಾಕರ್, ಕೆಲವು ಪಕ್ಷಗಳ ಜೊತೆ ಮಾತನಾಡಿದ್ದೇನೆ. ಪಕ್ಷ ಟಿಕೆಟ್ ಕೊಡದೆ ಇದ್ದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಲಿದ್ದೇನೆ. ಉಪಚುನಾವಣೆಗೆ ನಿಲ್ಲುವುದಂತು ಖಚಿತ ಎಂದಿದ್ದಾರೆ.
ಜೊತೆಗೆ ಶಿರಾ ಕ್ಷೇತ್ರ ನನಗೆ ಪರಿಚಿತವಾಗಿದೆ. ಯಾಕಂದ್ರೆ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾಗ ಇಡೀ ಕರ್ನಾಟಕ ಸುತ್ತಿದ್ದೇನೆ. ಅದರಲ್ಲಿ ತುಮಕೂರು, ಶಿರಾ ಜನತೆ ಜೊತೆಯೂ ಸಂಪರ್ಕ ಹೊಂದಿದ್ದೇನೆ. ಈ ಕೊರೊನಾ ಸಮಯದಲ್ಲಿ ಮಾಸ್ಕ್ ವಿತರಿಸುವುದಕ್ಕೆ ಶಿರಾಗೆ ಹೋಗಿದ್ದೆ ಎಂದಿದ್ದಾರೆ.
ಇನ್ನು ನಾನು ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದೇನೆ, ಸಿನಿಮಾ ಮಾಡಿದ್ದೇನೆ ಎಂಬ ಕಾರಣಕ್ಕೆ ಜನ ಮತ ಹಾಕುವುದು ಬೇಡ. ಅವರಿಗಾಗಿ ನಾನು ಕೆಲಸ ಮಾಡುತ್ತೇನೆಂಬ ನಂಬಿಕೆಯಲ್ಲಿ ಮತ ಹಾಕಲಿ ಎಂದಿದ್ದಾರೆ. ಒಟ್ಟಾರೆ ಶಿರಾ ಚುನಾವಣಾ ಅಖಾಡಕ್ಕೆ ಹೊಸ ಎಂಟ್ರಿಯಾಗಿದೆ.