ಬೆಂಗಳೂರು: ಬಾಲಿವುಡ್ ನಟ ಶುಶಾಂತ್ ಸಿಂಗ್ ಆತ್ಮಹತ್ಯೆಯ ನಂತರ ಡ್ರಗ್ಸ್ ದಂಧೆಯಲ್ಲಿ ಅನೇಕರು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು .ಇದು ಸ್ಯಾಂಡಲ್ವುಡ್ ಬಾಲಿವುಡ್ ಸೇರಿದಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿತ್ತು .ಮತ್ತು ಇದೇ ವಿಚಾರವಾಗಿ ಕೆಲವರು ಜೈಲು ಪಾಲಾಗಿದ್ದರು . ಇದೇ ಸಮಯದಲ್ಲಿ ರಾಜ್ಯದಲ್ಲಿ ಗುಟ್ಕಾ ಪಾನ್ ಮಸಾಲವನ್ನು ನಿಷೇಧಿಸಲು ಸರ್ಕಾರ ಯೋಜಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಗುಟ್ಕಾ ನಿಷೇಧದಿಂದ ತಮಗೆ ತೊಂದರೆ ಆಗಬಹುದು ಎಂದು ಅಡಕೆ ಬೆಳೆಗಾರರು ಆತಂಕಗೊಂಡಿದ್ದಾರೆ. ಸರ್ಕಾರ ಅಡಕೆ ರೈತರ ಹಿತ ಕಾಯುವ ಭರವಸೆ ನೀಡಬೇಕು ಎಂದು ಅರಗ ಜ್ಞಾನೇಂದ್ರ ನೇತೃತ್ವದ ಅಡಕೆ ಕಾರ್ಯಪಡೆ ಮನವಿ ಮಾಡಿತು. ಹಾಗೆಯೇ, ಅಡಕೆ ಕಾರ್ಯಪಡೆಗೆ ಒಂದು ಕಚೇರಿ ಸ್ಥಾಪನೆ ಆಗಬೇಕು. ಅಡಕೆ ಸಂಶೋಧನೆ ಮೊದಲಾದ ಕಾರ್ಯಕ್ಕೆ 2 ಕೋಟಿ ರೂ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಇದೀಗಾಗಲೇ ಅಡಕೆ ಬೆಲೆ ತುಂಬಾ ಕಡಿಮೆ ಇದೆ. ಅದರ ನಡುವೆ ಗುಟ್ಕಾ ನಿಷೇಧ ನಿರ್ದಾರ ಇನ್ನೂ ಅವರನ್ನು ಆತಂಕಕ್ಕೀಡು ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಅಡಕೆ ಬೆಳೆಗಾರರಿಗೆ ತೊಂದರೆ ಆಗಬಾರದು ಎಂದು ವಿನಂತಿ ಮಾಡಿಕೊಂಡರು.
ಇದೇ ವಿಚಾರವಾಗಿ ಮಾತನಾಡಿದ ಸಿಎಂ ಬಿಎಸ್ವೈ ಯಾವುದೇ ಸುಳ್ಳು ಸುದ್ದಿಗಳನ್ನ ನಂಬಬಾರದು. ಸರ್ಕಾರ ಯಾವತ್ತೂ ಕೂಡ ಅಡಿಕೆ ಬೆಳೆಗಾರರ ಪರವಾಗಿ ಇರುತ್ತದೆ. ನಮ್ಮ ಸರ್ಕಾರ ಅಡಕೆ ಬೆಳೆಗಾರರ ಹಿತರಕ್ಷಣೆ ಕಾಪಾಡಲು ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರು ಭರವಸೆ ನೀಡಿದರು.