Thursday, August 5, 2021
No menu items!
Home Latest ಮೂರು ತಿಂಗಳು ನ್ಯೂಸ್ ಚಾನೆಲ್ ಗಳ ಟಿ ಆರ್ ಪಿ ಸ್ಥಗಿತ..!!!

ಮೂರು ತಿಂಗಳು ನ್ಯೂಸ್ ಚಾನೆಲ್ ಗಳ ಟಿ ಆರ್ ಪಿ ಸ್ಥಗಿತ..!!!

ನವದೆಹಲಿ: ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಾರ್ಕ್) ಸಂಸ್ಥೆ ಎಲ್ಲಾ ಸುದ್ದಿ ವಾಹಿನಿಗಳ ಟಿಆರ್ಪಿಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ. ಸುದ್ದಿ ಬಿಟ್ಟು ಬೇರೆ ಎಂಟರ್ಟೈನ್ಮೆಂಟ್, ಸ್ಪೋರ್ಟ್ಸ್ನಂಥ ಬೇರೆ ವಿಭಾಗಗಳ ವಾಹಿನಿಗಳ ಟಿಆರ್ಪಿ ಯಥಾಪ್ರಕಾರ ಮುಂದುವರಿಯಲಿದೆ.

ತಾಂತ್ರಿಕ ಸಮಿತಿಯು ಟಿಆರ್‌ಪಿ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಪರಿಶೀಲಿಸಲಿದ್ದು, ಕಳ್ಳತನಕ್ಕೆ ಇದ್ದ ಅವಕಾಶಗಳನ್ನು ಸರಿಪಡಿಸಿಕೊಳ್ಳಲಿದೆ. ಕಳೆದ ಗುರುವಾರ ರಿಪಬ್ಲಿಕ್‌ ಸೇರಿದಂತೆ ಕೆಲವು ಚಾನೆಲ್‌ಗಳು ಹಣ ಪಾವತಿಸುವ ಮೂಲಕ ಟಿಆರ್‌ಪಿಯನ್ನು ಹೆಚ್ಚಿಸಿದ ಪ್ರಕರಣವನ್ನು ಮುಂಬಯಿ ಪೊಲೀಸರು ಬೇಧಿಸಿದ್ದರು.

ಟಿಆರ್ಪಿ ಎಂದರೆ ಟೆಲಿವಿಶನ್ ರೇಟಿಂಗ್ ಪಾಯಿಂಟ್ಸ್ ಎಂದರ್ಥ. ಇದು ನ್ಯೂಸ್ ಚಾನೆಲ್ಗಳನ್ನೂ ಸೇರಿ ಟಿವಿ ವಾಹಿನಿಗಳನ್ನು ಎಷ್ಟು ಮಂದಿ ವೀಕ್ಷಿಸುತ್ತಾರೆ ಎಂದು ಲೆಕ್ಕ ಹಾಕುವ ಸ್ವಯಂಚಾಲಿತ ಸಮೀಕ್ಷಾ ವ್ಯವಸ್ಥೆ. ಬಾರ್ಕ್ ಸಂಸ್ಥೆ ಈ ಕಾರ್ಯವನ್ನ ನಿರ್ವಹಿಸುತ್ತದೆ. ದೇಶದ ಅನೇಕ ನಗರ, ಪಟ್ಟಣ, ಗ್ರಾಮಗಳಲ್ಲಿ ಸೆಟ್ ಟಾಪ್ ಬಾಕ್ಸ್ ಇರುವ ಕೆಲ ಆಯ್ದ ಮನೆಗಳಲ್ಲಿ ರಹಸ್ಯವಾಗಿ ಈ ಟಿಆರ್ಪಿ ಮೀಟರ್ಗಳನ್ನ ಅಳವಡಿಸಲಾಗುತ್ತದೆ. ಜನ ಏನು ವೀಕ್ಷಣೆ ಮಾಡುತ್ತಾರೆ ಎಂಬುದರ ಮೇಲೆ ಟಿಆರ್ಪಿ ನಿರ್ಧಾರವಾಗುತ್ತದೆ. ಈ ಟಿಆರ್ ಪಿ ಪಟ್ಟಿಯನ್ನು ವಾರಕ್ಕೊಮ್ಮೆ ಬಾರ್ಕ್ ಸಂಸ್ಥೆ ಬಿಡುಗಡೆ ಮಾಡುತ್ತದೆ. ಅದರಲ್ಲಿ ಜನ ಯಾವ ವಾಹಿನಿಯನ್ನ ಹೆಚ್ಚು ವೀಕ್ಷಣೆ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಅದರ ಆಧಾರದ ಮೇಲೆಯೇ ಕೆಲವೊಂದು ಜಾಹೀರಾತು ಕಂಪನಿಗಳು ಯಾವ ವಾಹಿನಿಗೆ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಆದ್ರೆ ಇದೀಗ ಆ ಟಿಆರ್ಪಿಯನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.ಈ ನಿರ್ಧಾರ ಬಹಳ ಮುಖ್ಯ ಎಂದು ಬಾರ್ಕ್ ಇಂಡಿಯಾ ಮಂಡಳಿಯ ಅಧ್ಯಕ್ಷ ಪುನೀತ್ ಗೋಯೆಂಕಾ ಹೇಳಿದ್ದಾರೆ.

ಸುದ್ದಿವಾಹಿನಿಗಳ ಟಿಆರ್ಪಿಯನ್ನು 3 ತಿಂಗಳುಗಳ ಕಾಲ ನಿಲ್ಲಿಸುವ, ಬಾರ್ಕ್ ಸಂಸ್ಥೆಯ ನಿರ್ಧಾರವನ್ನು ನ್ಯೂಸ್ ಬ್ರಾಡ್ಕ್ಯಾಸ್ಟರ್ಸ್ ಅಸೋಷಿಯೇಶನ್ (ಎನ್ಬಿಎ) ಸ್ವಾಗತಿಸಿದೆ. ಟಿವಿ ರೇಟಿಂಗ್ನ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಸರಿಪಡಿಸಲು ಈ 12 ವಾರಗಳನ್ನ ಬಾರ್ಕ್ ಉಪಯೋಗಿಸಬೇಕು ಎಂದು ಎನ್ಬಿಎ ಕೂಡ ಸಲಹೆ ನೀಡಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments