Friday, September 24, 2021
No menu items!
Home Karnataka ಕಸ ಸಂಗ್ರಹಕ್ಕೆ 200 ರೂಪಾಯಿ ನಿಗದಿ ಮಾಡಿದ ಬಿಬಿಎಂಪಿ

ಕಸ ಸಂಗ್ರಹಕ್ಕೆ 200 ರೂಪಾಯಿ ನಿಗದಿ ಮಾಡಿದ ಬಿಬಿಎಂಪಿ

ಬೆಂಗಳೂರು: ಪ್ರತಿ ಮನೆಗಳಲ್ಲಿ ಸಂಗ್ರಹಿಸುವ ಕಸಕ್ಕೆ ಇನ್ನು ಮುಂದೆ 200 ರೂಪಾಯಿ ಪಾವತಿಸಬೇಕಾಗಿದೆ. ಪೌರ ಕಾರ್ಮಿಕರ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಬಿಬಿಎಂಪಿ ತೆಗೆದುಕೊಂಡಿದ್ದು, ಕಸ ಸಂಗ್ರಹದ ಶುಲ್ಕವನ್ನು 200ಕ್ಕೆ ಹೆಚ್ಚಿಸಿದೆ. ಜನವರಿಯಿಂದ ಪ್ರತಿ ತಿಂಗಳು 200 ರೂ.ಯಂತೆ ಸಾರ್ವಜನಿಕರು ಶುಲ್ಕವನ್ನು ಪಾವತಿಸಬೇಕಾಗಿದೆ.

ಖಾಸಗಿ ಒಡೆತನಕ್ಕೆ ಒಳಪಟ್ಟ ಸಂಸ್ಥೆಗಳು ಕಸ ಸಂಗ್ರಹಣೆಗೆ 10,000 ರೂ. ಪಾವತಿಸಬೇಕು. ಬೆಸ್ಕಾಂನ ವಿದ್ಯುತ್ ಸೇವೆಗೆ ಶುಲ್ಕ ಪಾವತಿಸುವಂತೆ ನಮ್ಮ ಕಸ ವಿಲೇವಾರಿ ಸೇವೆಗೂ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ. ವಿದ್ಯುತ್ ಶುಲ್ಕದ ಜೊತೆಗೆ ಜನವರಿಯಿಂದ ಕಸದ ಶುಲ್ಕವು ಪಾವತಿಯಾಗುತ್ತದೆ. ಆದರೆ ಶುಲ್ಕದ ಹಣ ಬಿಬಿಎಂಪಿ ಖಾತೆಗೆ ಹೋಗುತ್ತದೆ ಎಂದು ಎಲ್ಡಬ್ಲ್ಯೂಎಂ ವಿಶೇಷ ಆಯುಕ್ತರಾದ ರಣದೀಪ್ ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ದೊಡ್ಡ ಸಮಸ್ಯೆ ಅಂದ್ರೆ ಅದು ಕಸದ ಸಮಸ್ಯೆ. ಬಿಬಿಎಂಪಿ ಎಷ್ಟೆ ಸಾಹಸ ಪಟ್ಟರು ಬೆಂಗಳೂರನ್ನು ಇನ್ನು ಕಸ ಮುಕ್ತ ಮಾಡಲು ಆಗುತ್ತಿಲ್ಲ. ಬಿಬಿಎಂಪಿ ವಾಹನಗಳು ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸಿದ್ರು ಸಹ ಜನ ರಸ್ತೆ ಬದಿ ಕಸ ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಎಲ್ಲೆಂದರಲ್ಲಿ ಕಸ ಎಸೆದು ವಾಸನೆ ಬರುವಂತೆ ಮಾಡುತ್ತಿದ್ದಾರೆ.ಇದರ ನಡುವೆಯೂ ಸಿಲಿಕಾನ್ ಸಿಟಿಯನ್ನು ಸೌಂದರ್ಯವಾಗಿರಿಸಿರುವುದು ಪೌರ ಕಾರ್ಮಿಕರು. ರಸ್ತೆ ಬದಿ ಕಸ ಗಬ್ಬು ನಾರುತ್ತಿದ್ದರು, ಅದನ್ನ ಕೈಯಿಂದನೇ ತೆಗೆದು ಆ ಜಾಗವನ್ನು ಸ್ವಚ್ಛ ಮಾಡುತ್ತಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments