Saturday, July 24, 2021
No menu items!
Home Special ಬಾಳೆ ಸಿಪ್ಪೆಯನ್ನ ಹಾಗೇ ಬಿಸಾಕ್ತೀರಾ..? ಒಮ್ಮೆ ಈ ಸ್ಟೋರಿ ನೋಡಿ..!

ಬಾಳೆ ಸಿಪ್ಪೆಯನ್ನ ಹಾಗೇ ಬಿಸಾಕ್ತೀರಾ..? ಒಮ್ಮೆ ಈ ಸ್ಟೋರಿ ನೋಡಿ..!

ಸಾಮಾನ್ಯವಾಗಿ ನಾವೆಲ್ಲಾ ಬಾಳೆ ಹಣ್ಣನ್ನ ತಿಂದು ಅದರ ಸಿಪ್ಪೆಯನ್ನ ಬಿಸಾಡಿ ಬಿಡ್ತೇವೆ. ಆದ್ರೆ ಅದರ ಉಪಯೋಗ ನಮ್ಗೆ ಗೊತ್ತಿರಲ್ಲ. ಕಸದ ಬುಟ್ಟಿ ಸೇರೋ ಈ ಸಿಪ್ಪೆಯಲ್ಲಿ ಹಣ್ಣಿನಷ್ಟೇ ಅತ್ಯುತ್ತಮ ಅಂಶ ಇರುತ್ತವೆ. ಆ ಬಗ್ಗೆ ಹೇಳ್ತೀವಿ ಓದಿ.

ಬಾಳೆ ಹಣ್ಣಿನ ಸಿಪ್ಪೆಯು ಅನೇಕ ರೀತಿಯ ಆರೋಗ್ಯಕರ ಅಂಶಗಳು ಇವೆ. ಈ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗೆಯೇ ನಾರಿನಂಶ, ಮೆಗ್ನೀಷಿಯಂ, ಪೊಟಾಷಿಯಂ ಕೂಡ ಇದರಲ್ಲಿ ಅಡಗಿರುತ್ತವೆ. ಇಂತಹ ಹಲವು ಪೋಷಕಾಂಶಗಳನ್ನು ಬಾಳೆ ಸಿಪ್ಪೆಯಿಂದ ಪಡೆಯಬಹುದಾಗಿದೆ.

ಬಿಳಿ ಹಲ್ಲಿಗಳಿಗಾಗಿಯೂ ಬಾಳೆ ಹಣ್ಣಿನ ಸಿಪ್ಪೆಯನ್ನು ಬಳಸಬಹುದು. ಹೇಗೆ ಅಂತೀರಾ. ಬಾಳೆ ಹಣ್ಣಿನ ಸಿಪ್ಪೆಯಿಂದ ಒಂದು ನಿಮಿಷ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿ. ಒಂದು ವಾರ ಈ ರೀತಿ ಮಾಡಿದರೆ ಹಳದಿಗಟ್ಟಿದ ನಿಮ್ಮ ಹಲ್ಲುಗಳು ಶುಭ್ರವಾಗಿ ಕಾಣಿಸುತ್ತದೆ. ಆಮೇಲೆ ಪಳ ಪಳ ಅಂತ ಹೊಳೆಯುತ್ತವೆ.

ಚರ್ಮ ಸುಕ್ಕುಗಟ್ಟಿದ್ದರೆ ಬಾಳೆ ಹಣ್ಣಿನ ಸಿಪ್ಪೆಯನ್ನು ಆ ಜಾಗದಲ್ಲಿ ಸಿಪ್ಪೆಯಿಂದ ಉಜ್ಜಿ. ಇದರಿಂದ ತ್ವಚೆಯ ಮೇಲೆ ದ್ರವಾಂಶ ಬೀರುತ್ತದೆ. ಇದರಿಂದ ಸುಕ್ಕು ಮರುಕಳಿಸುವುದು ತಪ್ಪುತ್ತದೆ. ಮುಖ ಕಾಂತಿಯಿಂದ ಹೊಳೆಯುತ್ತದೆ.

ಮುಖ್ಯವಾಗಿ ಮುಖದಲ್ಲಿ ಮೂಡುವ ಮೊಡವೆಗಳ ಸಮಸ್ಯೆಗೆ ಬಾಳೆ ಸಿಪ್ಪೆಯಿಂದ ಪರಿಹಾರ ಕಂಡುಕೊಳ್ಳಬಹುದು. ಮೊಡವೆಗಳಿರುವ ಜಾಗದಲ್ಲಿ ಬಾಳೆ ಸಿಪ್ಪೆಯಿಂದ ಪ್ರತಿನಿತ್ಯ ಸವರುವುದರಿಂದ ಮೊಡವೆಗಳು ಕಡಿಮೆಯಾಗುತ್ತಾ ಹೋಗುತ್ತವೆ.

ಹೀಗೆ ಬಾಳೆ ಹಣ್ಣಿನ ಸಿಪ್ಪೆಯನ್ನ ತ್ವಚ್ಛೆಯ ಆರೈಕೆಗೆ ಮನೆಮದ್ದಾಗಿ ಬಳಸಿಕೊಳ್ಳಬಹುದು. ಇನ್ಮುಂದೆ ಹಣ್ಣು ತಿಂದು ಸಿಪ್ಪೆ ಎಸೆಯಬೇಡಿ, ಹಾಗೇ ಮುಖದ ಮೇಲೆ ಉಜ್ಜಿ ಎಸೆಯಿರಿ. ತ್ವಜೆಯೂ ಸುಂದರವಾಗುತ್ತೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments