ನವದೆಹಲಿ ; ವಿವಿಐಪಿ ಗಳ ಓಡಾಟಕ್ಕಾಗಿ ಹೆಲಿಕಾಪ್ಟರ್ ಖರೀದಿ ಒಪ್ಪಂದದ ವೇಳೆ ಅವ್ಯವಹಾರ ನಡೆದಿದೆ ಎನ್ನಲಾದ ಕೇಸ್ ನಲ್ಲಿ ಕಂಬಿ ಎಣಿಸುತ್ತಿದ್ದ ಉದ್ಯಮಿ ಮತ್ತು ಮಧ್ಯವರ್ತಿ ರಾಜೀವ್ ಸಕ್ಸೇನಾ ಅವರಿಗೆ ಇಂದು ದೆಹಲಿ ಕೋರ್ಟ್ ಮಧ್ಯಂತರಾ ಜಾಮೀನು ನೀಡಿದೆ.
ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿ, ಕೋಲಾವೆಬ್ಬಿಸಿತ್ತು. ನಂತರ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. ಇದೀಗ ರಾಜೀವ್ ಸಕ್ಸೇನಾ ಅವರಿಗೆ ಮಧ್ಯಂತರ ಜಾಮೀನು ನೀಡಿರುವುದಕ್ಕೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿ , ಆರೋಪಿಯ ವಿಚಾರಣೆ ನಡೆಸಲು ಸಮಾಯವಕಾಶ ಕೇಳಿದೆ.
ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ವೇಳೆ ಮಧ್ಯಸ್ಥಿತಿಕೆ ವಹಿಸಿದ ಆರೋಪ ಎದುರಿಸುತ್ತಿರುವ ದುಬೈ ಮೂಲದ ಉದ್ಯಮಿ ಸಕ್ಸೇನಾ ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು ₹2ಲಕ್ಷ ಮೌಲ್ಯದ ವೈಯುಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ಆಧಾರದ ಮೇಲೆ ಡಿ.11ರ ವರೆಗೆ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಈ ಆದೇಶ ನೀಡಿದ್ದು, ಪ್ರಕರಣದಲ್ಲಿ ಇದೇ ಆರೋಪ ಎದುರಿಸುತ್ತಿರುವ ಸಂದೀಪ್ ತ್ಯಾಗಿ ಅವರಿಗೂ ಜಾಮೀನು ನೀಡಿದೆ. ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ವೇಳೆ ಸುಮಾರು ₹3600 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.