Saturday, December 4, 2021
No menu items!
Home Latest ಪ್ರಪಂಚವೇ ಮತ್ತೆ ಅಮೇರಿಕಾದತ್ತ ತಿರುಗಿ ನೋಡುವಂತೆ ಮಾಡುತ್ತೇನೆ; ಜೋ ಬೈಡನ್

ಪ್ರಪಂಚವೇ ಮತ್ತೆ ಅಮೇರಿಕಾದತ್ತ ತಿರುಗಿ ನೋಡುವಂತೆ ಮಾಡುತ್ತೇನೆ; ಜೋ ಬೈಡನ್

ವಾಷಿಂಗ್ಟನ್ : ಯುನೈಟೆಡ್‌ ಸ್ಟೇಟ್ಸ್ ಆಫ್ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಬಳಿಕ ಭರ್ಜರಿ ಮತಗಳೊಂದಿಗೆ ಗೆದ್ದು , ಅಮೇರಿಕಾದ ಮುಂದಿನ ಅಧ್ಯಕ್ಷ ರಾಗಿ ನಿಯೋಜನೆಗೊಂಡಿರುವ ಜೊ ಬೈಡನ್ ದೇಶವನ್ನದ್ದೇಶಿಸಿ ಮಾತನಾಡಿದ್ದು, ಅಧ್ಯಕ್ಷೀಯ ಅಭ್ಯರ್ಥಿಯೋರ್ವನಿಗೆ ದಾಖಲೆ ಪ್ರಮಾಣದಲ್ಲಿ ಮತ ನೀಡಿದ್ದಾರೆ. ಈ ನಂಬಿಕೆಯನ್ನು ನಾನು ಹುಸಿ ಮಾಡಲಾರೆ ಎಂದಿದ್ದಾರೆ.

ಅಮೆರಿಕವನ್ನು ಒಂದಾಗಿ ಮುನ್ನಡೆಸುವ ಅಧ್ಯಕ್ಷನಾಗಿ ಕೆಲಸ ಮಾಡುವೆ. ವಿಭಜಿಸುವ ಕೆಲಸ ಮಾಡಲ್ಲ ಎಂಬ ಆಶ್ವಾಸನೆ, ಭರವಸೆಯನ್ನು ನೀಡಿದ್ದಾರೆ.ದೇಶದ ಜನರು ನೀಡಿರುವ ಜನಾದೇಶವೇ ಸ್ಪಷ್ಟವಾಗಿದೆ.ಅವರ ನಿರೀಕ್ಷೆಯಂತೆಯೇ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದಿನ ಅಧ್ಯಕ್ಷರಾಗಿದ್ದ ಟ್ರಂಪ್ ಆಡಳಿತದಲ್ಲಿ ನಮ್ಮ ಅಮೆರಿಕ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಘಟನೆಗಳು ನಡೆದಿವೆ. ಜನರ ಭಾವನೆಗಳಲ್ಲಿ ವ್ಯತ್ಯಾಸವಾಗಿದೆ. ವಿಭಜನೆಯ ಹಾದಿ ಹಿಡಿದಿದೆ.ಇದನ್ನೆಲ್ಲಾ ಸರಿ ಮಾಡುವ ಬಹು ದೊಡ್ಡ ಜವಾಬ್ದಾರಿ ನನ್ನ ಮೇಲಿದೆ.ನಾನೆಂದಿಗೂ ದೇಶ ವಿಭಜನೆಯಾಗಲು ಬಿಡುವುದಿಲ್ಲ. ಏಕತೆ ಸಾಧಿಸಿ ದೇಶವನ್ನು ಮತ್ತೆ ಸರಿದಾರಿಗೆ ತಂದು ಸದೃಢಗೊಳಿಸುತ್ತೇನೆ. ಇಡೀ ಪ್ರಪಂಚವೇ ಅಮೇರಿಕಾದತ್ತ ಮತ್ತೆವತಿರುಗಿ ನೋಡುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಚುನಾವಣೆಯ ಬಳಿಕ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಟ್ರಂಪ್‍ಗಾಗಿರುವ ನಿರಾಸೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಾನು ಕೂಡ ಒಂದೆರಡು ಬಾರಿ ನಿರಾಸೆ ಅನುಭವಿಸಿದ್ದೇನೆ. ನಾವು ಶತ್ರುಗಳಲ್ಲ. ನಿಮ್ಮನ್ನು ಗೌರವದಿಂದ ಕಾಣಲು ಬಯಸುತ್ತೇನೆ. ಅಲ್ಲದೇ ನನ್ನ ಗೆಲುವಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments