ಬ್ರೆಜಿಲ್: ಮಿನಾಸ್ ಗೆರಿಯಾಸ್ನ ಜಾವೋ ಮೊನ್ಲೆವಾಡೆ ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಿಆರ್-381ರಲ್ಲಿ ನಿನ್ನೆ ಭೀಕರ ಅಪಘಾತವೊಂದು ಸಂಭವಿಸಿದೆ. ಸೇತುವೆ ಮೇಲೆ ವೇಗವಾಗಿ ಚಲಿಸುತ್ತ ಬಂದಿದೆ. ವೇಗವಾಗಿ ಬಂದ ಕಾರಣ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ.
ಹೊಡೆದ ರಭಸಕ್ಕೆ ಬಸ್ ಸುಮಾರು 50 ಅಡಿ ಆಳಕ್ಕೆ ಬಿದ್ದಿದೆ. ಅಪಘಾತದಿಂದ ಭಾರೀ ಪ್ರಮಾಣದಲ್ಲೇ ಜನ ಜೀವ ಹೋಗಿದೆ. ಸುಮಾರು 16 ಮಂದಿ ದುರಂತ ಸಾವಿಗೀಡಾಗಿ, 27 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಒಂದೇ ವಾರದ ಅಂತರದಲ್ಲಿ ಬ್ರೆಜಿಲ್ನಲ್ಲಿ ಸಂಭವಿಸಿದ ಎರಡನೇ ಭೀಕರ ಅಪಘಾತ ಇದಾಗಿದೆ.
ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ.
ಚಾಲಕ ಬಸ್ಸನ್ನು ರಿವರ್ಸ್ ತೆಗೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ. ಬಸ್ ಸೇತುವೆಯಿಂದ ಕೆಳಗೆ ಬೀಳುವಾಗ ಅದರಲ್ಲಿ ಸುಮಾರು ನಾಲ್ಕು ಮಂದಿ ಇದ್ದರು ಎಂದು ಪ್ರತ್ಯಕ್ಷದರ್ಶಿಗಳೊಬ್ಬರು ತಿಳಿಸಿದ್ದಾರೆ.