ನವದೆಹಲಿ : ಇತ್ತೀಚೆಗೆ ಜ್ಯೋತಿಷ್ಯ ಶಾಸ್ತ್ರ ಸ್ವಲ್ಪ ಹೆಚ್ಚಾಗಿಯೇ ಇದೆ. ಅದರಲ್ಲೂ ಚುನಾವಣೆ ಅಂತ ಸ್ಪರ್ಧೆ ಬಂದ್ರೆ ಸಾಕು ಜ್ಯೋತಿಷಿಗಳು ಅಭ್ಯರ್ಥಿಗಳ ಭವಿಷ್ಯ ಹೇಳೋದಕ್ಕೆ ಶುರು ಮಾಡಿಬಿಡ್ತಾರೆ. ಆ ಅಭ್ಯರ್ಥಿ ಗೆಲ್ತಾರೆ, ಈ ಅಭ್ಯರ್ಥಿ ಸೋಲ್ತಾರೆ ಅನ್ನೋದನ್ನ ಹೇಳಿ ಚರ್ಚೆಗೆ ಗ್ರಾಸವಾಗುವಂತೆ ಮಾಡ್ತಾರೆ. ಹೀಗಾಗಿ ಈ ರೀತಿಯ ಭವಿಷ್ಯ ಹೇಳುವ ಆಗಿಲ್ಲ ಅಂತ ಚುನಾವಣಾ ಆಯೋಗ ಹೇಳಿದೆ.
ಬಿಹಾರದಲ್ಲಿ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಪರಿಷ್ಕೃತ ಸಂಹಿತೆಯನ್ನು ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, ಜ್ಯೋತಿಷಿಗಳ ಬಗ್ಗೆಯೂ ಪ್ರಕಟಿಸಿದೆ. ಚುನಾವಣಾ ಸಮಿಕ್ಷೆಗಳ ಬಗ್ಗೆ ಮಾತನಾಡುವ ಜ್ಯೊತಿಷಿಗಳು, ಟ್ಯಾರೋಟೋ ಕಾರ್ಡ್ ರೀಡರ್ಸ್ ಮತ್ತು ವಿಶ್ಲೇಷಕರಿಗೂ ಇದು ಅನ್ವಯಿಸುತ್ತದೆ ಎಂದಿದ್ದಾರೆ. ನೀತಿ ಸಂಹಿತೆ ಜಾರಿ ಇರುವವರೆಗೂ ಯಾವ ಪಕ್ಷ ಗೆಲ್ಲುತ್ತೆ, ಯಾವ ಅಭ್ಯರ್ಥಿ ಗೆಲ್ತಾರೆ ಅಂತ ಭವಿಷ್ಯ ನುಡಿಯಬಾರದು ಎಂದು ಆದೇಶಿಸಿದೆ.
ಜೊತೆಗೆ ಮಾಧ್ಯಮದವರಿಗೂ ಸೂಚನೆ ನೀಡಿದ್ದು, ನೀತಿ ಸಂಹಿತೆ ಅವಧಿಯಲ್ಲಿ ಯಾವುದೇ ಪೋಲ್ ನಡೆಯಬಾರದು ಎಂದು ತಿಳಿಸಿದೆ. ಫಲಿತಾಂಶದ ಪೋಲ್ ಗಳನ್ನು ಯಾವುದೇ ಮಾಧ್ಯಮಗಳು ಕೂಡ ಪ್ರಸಾರ ಮಾಡಬಾರದು. ಚುನಾವಣಾ ಆಯೋಗದಿಂದ ಅಧಿಕೃತ ಸೂಚನೆಗಳ ನಂತರವಷ್ಟೇ ಪ್ರಸಾರ ಮಾಡಬೇಕು ಎಂಬುದನ್ನು ತಿಳಿಸಿದೆ.