ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್ ನನ್ನ ಗೆಲವು ಜನರ ಗೆಲುವು ಎಂದು ಹೇಳಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಬೈಡೆನ್, ಮುಂಬರುವ ದಿನಗಳಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.
ಅಮೆರಿಕ, ಅವಕಾಶಗಳ ದೇಶವಾಗಿದೆ. ಒಗ್ಗಟ್ಟು ನಮ್ಮ ಶಕ್ತಿಯಾಗಿದೆ. ಎಲ್ಲ ಅಮೆರಿಕರನ್ನು ಒಟ್ಟುಗೂಡಿಸಿ ಸುಭದ್ರ ಅಮೆರಿಕ ನಿರ್ಮಿಸುವುದೇ ನನ್ನ ಕನಸು ಎಂದು ಬೈಡೆನ್ ಘೋಷಿಸಿದರು.
ಕೊರೋನಾ ಮಹಾಮಾರಿಯನ್ನು ಮಣಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಕಮಲಾ ಹ್ಯಾರಿಸ್ ಮಾ ತನಾಡಿ, ಭಾರತದ ಹೆಸರನ್ನು ಪ್ರಸ್ತಾಪಿಸಿದರು. ತಮ್ಮ ಅಮ್ಮ ಶ್ಯಾಮಲ ಗೋಪಾಲನ್ ಭಾರತದಿಂದ ಬಂದು ಹಲವು ಸವಾಲು ಎದುರಿಸಿದ್ದರು ಎಂದು ಹೇಳಿದರು. ಎಲ್ಲ ಮಹಿಳೆಯರ ಧ್ವನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಕಮಲಾ ಹ್ಯಾರಿಸ್ ಘೋಷಿಸಿದರು.
ಇನ್ನು ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಪದವಿ ಅಲಂಕರಿಸುತ್ತಿರುವ ಮೊದಲ ಮಹಿಳೆ.