Tuesday, October 26, 2021
No menu items!
Home Bharata ಗಂಡನ ಪ್ರೇಯಸಿಗಾಗಿ ದಾಂಪತ್ಯ ಜೀವನವನ್ನೇ ತ್ಯಾಗ ಮಾಡಿದ ಪತ್ನಿ..!

ಗಂಡನ ಪ್ರೇಯಸಿಗಾಗಿ ದಾಂಪತ್ಯ ಜೀವನವನ್ನೇ ತ್ಯಾಗ ಮಾಡಿದ ಪತ್ನಿ..!

ಭೋಪಾಲ್: ಕನ್ನಡದಲ್ಲಿ ಮಿಲನ ಸಿನಿಮಾ ಎಲ್ಲರಿಗೂ ನೆನಪಿರುತ್ತೆ. ಮನೆಯವರ ಬಲವಂತದಿಂದ ಮದುವೆಯಾಗಿ ತನ್ನ ಪ್ರಿಯಕರನಿಗಾಗಿ ತಾಳಿ ಕಟ್ಟಿದವನನ್ನೇ ಒಲ್ಲೆ ಎನ್ನುತ್ತಾಳೆ. ಅದರಂತೆ ಗಂಡ ಕೂಡ ಆಕೆಯ ಪ್ರಿಯಕರನನ್ನ ಹುಡುಕುವ ಪ್ರಯತ್ನ ನಡೆಸುತ್ತಾನೆ. ಇದನ್ನೆಲ್ಲಾ ನಾವೂ ಸಿನಿಮಾದಲ್ಲಿ ನೋಡಿರ್ತೇವೆ. ಆದ್ರೆ ಇಂಥದ್ದೇ ಘಟನೆ ನಿಜ ಜೀವನದಲ್ಲೂ ಆದ್ರೆ.. ಹೌದು ಅಂತದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ಸತ್ಯವಾಗಿದೆ.

ಸಿನಿಮೀಯ ರೀತಿಯಲ್ಲೇ ಈ ಘಟನೆ ನಡೆದಿದ್ದು, ವಿಹಾವಿತ ಮಹಿಳೆ ತನ್ನ ಗಂಡನಿಂದ ವಿಚ್ಛೇಧನ ಪಡೆದು, ಆತನ ಪ್ರೇಯಸಿ ಜೊತೆಯಲ್ಲೇ ಮದುವೆ ಮಾಡಿದ್ದಾಳೆ. ಇಂತ ಅಪರೂಪದ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಮದುವೆಯಾಗಿ 3 ವರ್ಷ ಕಳೆದ ನಂತರ ಹೆಂಡತಿ ಗಂಡನನ್ನು ತೊರೆದಿದ್ದಾಳೆ.

ಆಕೆಯ ಪತಿ ಮದುವೆಗೂ ಮೊದಲೇ ಬೇರೊಬ್ಬ ಯುವತಿಯನ್ನು ಪ್ರೀತಿಸಿದ್ದನಂತೆ. ಮದುವೆಯಾದ ಮೇಲೆ ಆ ಯುವತಿಯೊಂದಿಗೆ ಪತ್ನಿಯನ್ನೂ ಪ್ರೀತಿಸಲು ಆರಂಭಿಸಿದನಂತೆ. ತನ್ನ ಪ್ರೀತಿಯ ವಿಚಾರವನ್ನು ಹೆಂಡತಿಗೆ ಹೇಳಿ, ಇಬ್ಬರನ್ನೂ ಪತ್ನಿಯರನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ವ್ಯಕ್ತಪಡಿಸಿದ್ದನಂತೆ. ಆದರೆ ಒಂದೇ ಸಮಯದಲ್ಲಿ ಇಬ್ಬರು ಹೆಂಡತಿಯರನ್ನು ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ಗಂಡನಿಗೆ ನಿರಾಶೆ ಮಾಡದ ಪತ್ನಿ ವಿಚ್ಛೇದನ ನೀಡಿದ್ದಾಳೆ. ನಿಮ್ಮ ಪ್ರೇಯಸಿಯೊಂದಿಗೆ ಮದುವೆಯಾಗಿ ಚೆನ್ನಾಗಿರಿ ಎಂದು ಹರಸಿದ್ದಾಳೆ.

ಈ ಬಗ್ಗೆ ವಿಚ್ಚೇಧನ ನೀಡಿದ ಮಹಿಳೆಯ ಕಡೆಯ ವಕೀಲರು ಸುದ್ದಿಗಾರರೊಂದಿ ಮಾಹಿತಿ ಹಂಚಿಕೊಂಡಿದ್ದಾರೆ.ಮಹಿಳೆ ಬಹಳ ಪ್ರಬುದ್ಧರಾಗಿದ್ದರಿಂದ ಗಂಡ ಗರ್ಲ್ ಫ್ರೆಂಡ್ ಜೊತೆಗೆ ಜೀವನ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಾಳೆ ಎಂದು ಲಾಯರ್ ಹೇಳಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments