ಬೆಂಗಳೂರು : ಇತ್ತೀಚೆಗೆ ಬೆಳ್ಳಿತೆರೆಯಿಂದ ಕಿರುತೆರೆಗೆ ಸಾಕಷ್ಟು ಸ್ಟಾರ್ಸ್ ಗಳು ಬಂದಿದ್ದಾರೆ. ಬೆಳ್ಳಿತೆರೆಗಿಂದ ಕಿರುತೆರೆಯಲ್ಲೇ ಹೆಚ್ಚು ಮಿಂಚುತ್ತಿರುವವರು ಇದ್ದಾರೆ. ಇದೀಗ ಇನ್ನೊಬ್ಬರು ಇದಕ್ಕೆ ಜಾಯ್ನ್ ಆಗುತ್ತಿದ್ದಾರೆ. ಅವರೇ ರಾಧಿಕಾ ನಾರಾಯಣ್.
ಹೌದು, ಸಿನಿಮಾದಲ್ಲಿ ಮಿಂಚುತ್ತಿದ್ದ ರಾಧಿಕಾ ನಾರಾಯಣ್ ಇದೀಗ ಧಾರಾವಾಹಿ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈ ಧಾರಾವಾಹಿಯಿಂದ ಮೊದಲ ಬಾರಿಗೆ ಧಾರಾವಾಹಿ ಲೋಕಕ್ಕೆ ಕಾಲಿಡುತ್ತಿದ್ದಾರೆ ರಾಧಿಕಾ.
ಆದ್ರೆ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಿದ್ದಾರೆ ಅಂತಲ್ಲ. ಒಂದು ಅತಿಥಿ ಪಾತ್ರದಲ್ಲಿ ರಾಧಿಕಾ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಿರಿಯ ನಟಿಯರು ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ಮಾನ್ವಿತಾ ಕಾಮತ್, ಹಿರಿಯ ನಟಿ ಶೃತಿ, ಪವಿತ್ರ ಲೋಕೇಶ್ ಹೀಗೆ ಅನೇಕ ನಟಿಯರು ಕಿರುತೆರೆಯಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಸದ್ಯ ನಟ ಅನಿರುದ್ದ್ ಕೂಡ ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದು, ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ರಾಧಿಕಾ ನಾರಾಯಣ್ ಸರದಿ ಬಂದಿದೆ.
ರಾಧಿಕಾ ಎರಡು ಧಾರಾವಾಹಿಯಲ್ಲಿ ಬಣ್ಣಹಚ್ಚುತ್ತಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಆಕೃತಿ ಮತ್ತು ಮನಸಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಎರಡು ಧಾರಾವಾಹಿಯ ಮಹಾ ಸಂಚಿಕೆಯಲ್ಲಿ ರಾಧಿಕಾ ನಟಿಸಿದ್ದಾರೆ. ಧಾರಾವಾಹಿಯಲ್ಲಿ ನಡೆಯುವ ಕಬ್ಬಡಿ ಪಂದ್ಯದಲ್ಲಿ ರಾಧಿಕಾ ರೆಫರಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.