Monday, January 24, 2022
No menu items!
Home Bharata ಅಬುಧಾಬಿ ಮೂಲದ ಮುಬದಾಲದಿಂದ ರಿಲಯನ್ಸ್ ರೀಟೇಲ್ ನಲ್ಲಿ 6,247.5 ಕೋಟಿ ಹೂಡಿಕೆ

ಅಬುಧಾಬಿ ಮೂಲದ ಮುಬದಾಲದಿಂದ ರಿಲಯನ್ಸ್ ರೀಟೇಲ್ ನಲ್ಲಿ 6,247.5 ಕೋಟಿ ಹೂಡಿಕೆ

ಮುಂಬೈ: ಅಬುಧಾಬಿ ಮೂಲದ ಸಾರ್ವಭೌಮ ಹೂಡಿಕೆದಾರ ಮುಬದಾಲ ಇನ್‌ವೆಸ್ಟ್‌ಮೆಂಟ್ ಕಂಪೆನಿಯಿಂದ (ಮುಬದಾಲ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) 6,247.5 ಕೋಟಿ ರುಪಾಯಿ (AED 3.1 ಬಿಲಿಯನ್) ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಗುರುವಾರ ಘೋಷಣೆ ಮಾಡಿವೆ.

ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 1.40% ಈಕ್ವಿಟಿ ಪಾಲು ಖರೀದಿಯನ್ನು ಮುಬದಾಲ ಮಾಡಿದಂತಾಗುತ್ತದೆ.

ಈ ವರ್ಷದ ಆರಂಭದಲ್ಲಿ ಮುಬದಾಲದಿಂದ  ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ 1.2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಘೋಷಣೆ ಮಾಡಲಾಗಿತ್ತು.  ಜಿಯೋ ಪ್ಲಾಟ್ ಫಾರ್ಮ್ಸ್ ನಂತರ ರಿಲಯನ್ಸ್ ಇಂಡಸ್ಟ್ರೀಸ್ ನ ಮತ್ತೊಂದು ಅಂಗಸಂಸ್ಥೆಯಾದ  ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಮುಬದಾಲ ಮಾಡುತ್ತಿರುವ ಅತಿ ಮುಖ್ಯವಾದ ಹೂಡಿಕೆ ಇದು.

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್  ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ RRVLಗೆ ಇದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನ ಮೌಲ್ಯಯುತ ಹೂಡಿಕೆದಾರರಾಗಿ ಮುಬದಾಲವನ್ನು ಸ್ವಾಗತಿಸಲು ಸಂತೋಷವಾಗುತ್ತದೆ. ಜ್ಞಾನ ಶ್ರೀಮಂತಿಕೆಯಿಂದ ಕೂಡಿರುವ ಮುಬದಾಲದಂಥ ಸಂಸ್ಥೆ ಜತೆಗೆ ಸಹಭಾಗಿತ್ವ ವಹಿಸಿರುವುದನ್ನು ಗೌರವಿಸುತ್ತೇವೆ ಎಂದಿದ್ದಾರೆ.

ಭಾರತದ ರೀಟೇಲ್ ವಲಯವನ್ನು ಬಲಪಡಿಸಬೇಕು ಎಂದಿರುವ ನಮ್ಮ ಗುರಿಯ ಮೇಲೆ ಮುಬದಾಲ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಅದು ಕೂಡ ಲಕ್ಷಾಂತರ ಸಣ್ಣ ಪ್ರಮಾಣದ ಚಿಲ್ಲರೆ ಮಾರಾಟಗಾರರು, ವರ್ತಕರು- ತಂತ್ರಜ್ಞಾನದ ಶಕ್ತಿಯ ಮೂಲಕ. ಮುಬದಾಲದ ಹೂಡಿಕೆ ಮತ್ತು ಮಾರ್ಗದರ್ಶನವು ಈ ಪ್ರಯಾಣದಲ್ಲಿ ಬೆಲೆಯೇ ಕಟ್ಟಲಾಗದ ಬೆಂಬಲ ಆಗಲಿದೆ ಎಂದಿದ್ದಾರೆ.

ಮುಬದಾಲ ಇನ್ವೆಸ್ಟ್ ಮೆಂಟ್ ಕಂಪೆನಿ ಸಮೂಹದ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಖಲ್ದೂನ್ ಅಲ್ ಮುಬಾರಕ್ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಜತೆಗೆ ಬಾಂಧವ್ಯ ಗಟ್ಟಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ಅವರ ದೃಷ್ಟಿಕೋನವು ಎಲ್ಲರನ್ನೂ ಒಳಗೊಂಡಂತೆ ಭಾರತದ ಗ್ರಾಹಕರ ಆರ್ಥಿಕತೆಯನ್ನು ಡಿಜಿಟೈಸೇಷನ್ ಶಕ್ತಿಯ ಮೂಲಕ ಬದಲಾವಣೆ ಮಾಡುತ್ತದೆ. ಅವಕಾಶಗಳನ್ನು ಸೃಷ್ಟಿಸುತ್ತದೆ. ದೇಶದಲ್ಲಿರುವ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆಗೆ ಸಂಪರ್ಕ ಪಡೆಯಲು ಸಹಾಯ ಮಾಡುತ್ತದೆ. ಕಂಪೆನಿಯ ನಿರಂತರ ಬೆಳವಣಿಗೆಗೆ ಬೆಂಬಲಿಸಲು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ.  ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments