Monday, September 27, 2021
No menu items!
Home Bharata "800" ಕಾಂಟ್ರವರ್ಸಿ : ತಮಿಳುನಾಡು ಸಿಎಂ ಬಳಿ ಭದ್ರತೆ ಕೇಳಿದ ಕಾಲಿವುಡ್ ನಿರ್ದೇಶಕ …..!

“800” ಕಾಂಟ್ರವರ್ಸಿ : ತಮಿಳುನಾಡು ಸಿಎಂ ಬಳಿ ಭದ್ರತೆ ಕೇಳಿದ ಕಾಲಿವುಡ್ ನಿರ್ದೇಶಕ …..!

ಶ್ರಿಲಂಕಾ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಜೀವನಾಧರಿತ ಸಿನಿಮಾ “800” ಯಾಕೋ ಸೆಟ್ಟೇರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಸಿನಿಮಾ ಹೆಸರಿಟ್ಟ ಕ್ಷಣದಿಂದಲೇ ಕೇವಲ ವಿವಾದಗಳಿಂದಲೇ ಕುಖ್ಯಾತಿ ಪಡೆಯತೊಡಗಿದೆ. ಇದೀಗ ಈ ಚಿತ್ರಕ್ಕೆ ಸಂಭಂದವೇ ಇರದ ಕಾಲಿವುಡ್ ಸಿನಿಮಾ ನಿರ್ದೇಶಕರಿಗೂ ಬೆದರಿಕೆ ಕರೆ ಬರತೊಡಗಿದ್ದು ವಿವಾದ ಮತ್ತೆ ಭುಗಿಲೇರತೊಡಗಿದೆ.

800 ಸಿನಿಮಾ ಸೆಟ್ಟೇರಿ ತಮಿಳು ಚಿತ್ರನಟ ವಿಜಯ್ ಸೇತುಪತಿ ನಟಿಸುವುದಾಗಿಯೂ ವರದಿಯಾಗಿತ್ತು. ತದನಂತರ ತಮಿಳರ ಭಾರೀ ವಿರೋಧದ ನಂತರ ವಿಜಯ್ ಸೇತುಪತಿ ಅವರಿಗೆ ಬೆದರಿಕೆ ಕರೆಗಳು ಬರತೊಡಗಿದ್ದವು. ಇದಾದ ನಂತರ ವಿಜಯ್ ಸೇತುಪತಿ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿಯೂ ಬೆದರಿಕೆ ಕರೆ ಬಂದಿತ್ತು. ತದನಂತರ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನ ಬಂಧಿಸಲಾಗಿತ್ತು. ಇದಲ್ಲೆದರಿಂದ ಬೇಸತ್ತ ವಿಜಯ್ ಸೇತುಪತಿ ಚಿತ್ರದಿಂದ ದೂರ ಸರಿದಿದ್ದರು.

ಇದೀಗ 800 ಚಿತ್ರ ಕ್ಕೆ ಸಂಭದವೇ ಇರದ ಕಾಲಿವುಡ್ ನಿರ್ದೇಶಕ ಸೀನು ರಾಮಸ್ವಾಮಿ ಅವರಿಗೂ ಬೆದರಿಕೆ ಕರೆಗಳು ಬರುತ್ತಿದ್ದು ಕಿಡಿಗೇಡಿಗಳು ರಾಮಸ್ವಾಮಿ ಅವರ ಬೆನ್ನತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಸೀನು ರಾಮಸ್ವಾಮಿ ಅವರು ಭದ್ರತೆ ಒದಗಿಸುವಂತೆ ತಮಿಳುನಾಡಿನ ಸಿಎಂ ಅವರಲ್ಲಿ ಕೇಳಿಕೊಂಡಿದ್ದಾರೆ.

ವಿಜಯ್ ಸೇತುಪತಿ ಮತ್ತು ಸೀನು ರಾಮಸ್ವಾಮಿ ಒಳ್ಳೆಯ ಗೆಳೆಯರು. 800 ಸಿನಿಮಾಕ್ಕಾಗಿ ನಿರ್ದೇಶಕ ಸೀನು ರಾಮಸ್ವಾಮಿ ನಟ ವಿಜಯ್ ಸೇತುಪತಿ ಅವರಿಗೆ ಹಲವು ಟಿಪ್ಸ್ ನೀಡಿದ್ದರು. ಆದರೆ ತಮಿಳರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಜಯ್ ಅವರಿಗೆ ಚಿತ್ರದಿಂದ ದೂರ ಸರಿಯುವಂತೆ ಸೀನು ಅವರು ಮನವಿ ಮಾಡಿದ್ದರು.

ಆದರೆ ಇದೀಗ ಸೀನು ರಾಮಸ್ವಾಮಿ ಅವರಿಗೆ ಬೆದರಿಕೆ ಕರೆ ಬರುತ್ತಿರುವ ಉದ್ದೇಶ ಏನೆಂದೇ ತಿಳಿಯಾದಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತೀವ್ರಗತಿಯ ತನಿಖೆ ಆರಂಭಿಸಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments