ಗದಗ: ನಿನ್ನೆಯಿಂದ ಹತ್ತನೇ ತರಗತಿ ಹಾಗೂ ದ್ವಿತೀಯ ತರಗತಿಗಳು ಆರಂಭವಾಗಿದೆ. ಕೊರೊನಾ ವೈರಸ್ ಭಯದ ನಡುವೆಯೆ ಪೋಷಕರು ಮಕ್ಕಳನ್ನು ಕಳುಹಿಸಿದ್ದಾರೆ. ಆದ್ರೆ ಈ ಬೆನ್ನಲ್ಲೇ ಹತ್ತು ಶಿಕ್ಷಕರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಗದಗ ಜಿಲ್ಲೆಯಲ್ಲಿ ಹತ್ತು ಶಿಕ್ಷಕರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಈ ಬಗ್ಗೆ ಅಲ್ಲಿನ DDPI ಮಾಹಿತಿ ನೀಡಿದ್ದು, ಸೋಂಕು ಪತ್ತೆಯಾದ ಹತ್ತು ಜನ ಶಿಕ್ಷಕರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಶಾಲೆಯನ್ನು ಏಳು ದಿನಗಳ ಕಾಲ ಮುಚ್ಚಲಾಗಿದ್ದು, ಪ್ರಾಥಮಿಕ ಸಂಪರ್ಕಿತರಿಗೂ ಕ್ವಾರಂಟೈನ್ ಮಾಡಲಾಗಿದೆ ಎಂಬ ಮಾಹಿಸಿ ನೀಡಿದ್ದಾರೆ.