Thursday, September 16, 2021
No menu items!
Home Latest 'ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿದ್ದ ವಿದ್ಯಾರ್ಥಿಯಂತೆʼ: ರಾಹುಲ್ ಬಗ್ಗೆ ಪುಸ್ತಕ ಬರೆದ ಬರಾಕ್ ಒಬಾಮಾ

‘ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿದ್ದ ವಿದ್ಯಾರ್ಥಿಯಂತೆʼ: ರಾಹುಲ್ ಬಗ್ಗೆ ಪುಸ್ತಕ ಬರೆದ ಬರಾಕ್ ಒಬಾಮಾ

ನವದೆಹಲಿ: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಪುಸ್ತಕದಲ್ಲಿ ಸಾಲುಗಳನ್ನು ಬರೆದಿದ್ದಾರೆ. ರಾಹುಲ್ ಅವರು ಅಜ್ಞಾತ ಗುಣವನ್ನು ಹೊಂದಿದ್ದಾರೆ. ಅವರು ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕರಾಗಿದ್ದಾರೆ ಎಂದು ಬರೆದಿದ್ದಾರೆ.

“ಪಠ್ಯವನ್ನು ಓದಿ ಮುಗಿಸಿ ಶಿಕ್ಷಕರನ್ನ ಒಪ್ಪಿಸುವ ತವಕದಲ್ಲಿರುವ ವಿದ್ಯಾರ್ಥಿಯಂತೆ ಕಂಡರೂ ಪಠ್ಯವಿಷಯವನ್ನ ಸಂಪೂರ್ಣ ಕರಗತ ಮಾಡಿಕೊಳ್ಳುವ ಚಾತುರ್ಯತೆ ಅಥವಾ ಅಭಿಲಾಷೆ ಇಲ್ಲದ ವಿದ್ಯಾರ್ಥಿಯಾಗಿ ತೋರುವ ರಾಹುಲ್ ಅವರಲ್ಲಿ ಒಂದು ತಳಮಳದ, ಅಸ್ಪಷ್ಟ ಗುಣ ಇದೆ” ಎಂದು ಬರಾಕ್ ಒಬಾಮ ಹೇಳಿದ್ಧಾರೆ.

‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕದಲ್ಲಿ ಒಬಾಮ ತಮ್ಮ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಹಲವು ನಾಯಕರ ಬಗ್ಗೆ ಒಬಾಮ ಈ ಪುಸ್ತಕದಲ್ಲಿ ನೇರ ಅಭಿಪ್ರಾಯಗಳನ್ನ ವ್ಯಕ್ತಪಡಿಸಿ ಬರೆದಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ತನ್ನ ವಿಮರ್ಶೆಯಲ್ಲಿ ಉಲ್ಲೇಖಿಸಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನ ಒಬಾಮ ಸೌಂದರ್ಯಗಾತಿ ಎಂದು ಹೊಗಳಿರುವ ಒಬಾಮಾ, “ಚಾರ್ಲಿ ಕ್ರಿಸ್ಟ್ ಮತ್ತು ರಹಮ್ ಇಮ್ಯಾನುಯೆಲ್ ಅವರಂಥ ಪುರುಷರ ಸೌಂದರ್ಯದ ಬಗ್ಗೆ ನಮಗೆ ಹೇಳಲಾಗುತ್ತಿತ್ತೇ ಹೊರತು, ಮಹಿಳೆಯರ ಸೌಂದರ್ಯದ ಬಗ್ಗೆ ಅಲ್ಲ. ಇದಕ್ಕೆ ಸೋನಿಯಾ ಗಾಂಧಿ ಅವರಂಥ ಒಬ್ಬಿಬ್ಬರು ಅಪವಾದ” ಎಂದು ಬರಾಕ್ ಒಬಾಮ ಅವರ ಅನಿಸಿಕೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬರೆದಿದೆ.

ರಷ್ಯಾ ಅಧ್ಯಕ್ಷ ಪುಟಿನ್ ಅವರ ಬಗ್ಗೆಯೂ ಬರೆದಿದ್ದು, ಅವರ ಆಡಳಿತ ಬಗ್ಗೆ ಉಲ್ಲೇಖಿಸಿದ್ದಾರೆ.

ಒಬಾಮ ಬರೆದಿರುವ “ಎ ಪ್ರಾಮಿಸ್ಡ್ ಲ್ಯಾಂಡ್” ಪುಸ್ತಕ 768 ಪುಟಗಳಿದ್ದು, ನವೆಂಬರ್ 17ರಂದು ಬಿಡುಗಡೆಗೊಳ್ಳಲಿದೆ. ಇದರಲ್ಲಿ ಅವರು ತಮ್ಮ ಬಾಲ್ಯಾವಸ್ಥೆಯಿಂದ ಹಿಡಿದು ರಾಜಕೀಯವಾಗಿ ಉತ್ತುಂಗಕ್ಕೇರಿದ ಘಟನೆಗಳನ್ನ ಮೆಲುಕು ಹಾಕಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments