ಮೈಸೂರು: ಪ್ರತಾಪ್ ಸಿಂಹ ಹಾಗೂ ಸುಮಲತಾ ವಾಕ್ಸಮರ ಮುಂದುವರೆದಿದೆ. ನಿನ್ನೆ ಪ್ರತಾಪ್ ಸಿಂಹ ಅವರನ್ನು ಪೇಟೆ ರೌಡಿಗೆ ಹೋಲಿಸಿದ್ದ ಸುಮಲತಾ ಅವರಿಗೆ ಇಂದು ಪ್ರತಾಪ್ ಸಿಂಹ ಮತ್ತೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ಸುಮಲತಾ ಅವರು ನಿನ್ನೆ ನನ್ನನ್ನು ಪೇಟೆ ರೌಡಿಗೆ ಹೋಲಿಸಿದ್ದಾರೆ. ಆ ರೀತಿ ಅವರು ಹೇಳಿದ್ದಾರೆಂದರೆ ನಾಗರಹಾವು ಸಿನಿಮಾದ ಜಲೀಲ ಪಾತ್ರ ನೆನಪಾಗಿರಬೇಕು ಅದಕ್ಕೆ ಆ ರೀತಿ ಹೇಳಿದ್ದಾರೆಂದಿದ್ದಾರೆ.
ಚಮ್ಮಾರನ ಮಗ ಅಬ್ರಾಹಂ ಲಿಂಕನ್, ಚಹಾ ಮಾರುತ್ತಿದ್ದ ನರೇಂದ್ರ ಮೊದಿ ಅವರು ಪ್ರಧಾನಿಯಾಗಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಾಳೆಗಾರಿಕೆಗೆ ಅವಕಾಶವಿಲ್ಲ. ನಾನು ಬೆಂಗಳೂರಿನಿಂದ ಬರುವಾಗ ಯಲಿಯೂರು ಜನತೆ ಅಡ್ಡ ಹಾಕಿದ್ದರು ಹೀಗಾಗಿ ಅವರಿಗೆ ಸ್ಪಂದಿಸಿದ್ದೇನೆ. ಅದರಿಂದಾಚೆಗೆ ನನಗೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದಿದ್ದಾರೆ.
ಈ ಯಮ್ಮಾ ಏನು ಕೆಲಸ ಮಾಡಲ್ಲ. ಮಂಡ್ಯದಲ್ಲಿ ಏನೇ ಅಭಿವೃದ್ಧಿಯಾಗಬೇಕೆಂದರೆ ನನಗೆ ಹೇಳಿ ಅಂತ ಪ್ರತಾಪ್ ಸಿಂಹ ಹೇಳಿದ್ದರು. ಅದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, ಪ್ರತಾಪ್ ಸಿಂಹ ಒಬ್ಬ ಪೇಟೆ ರೌಡಿ ಇದ್ದಂಗೆ. ಆ ಮಾತಿಗೆಲ್ಲಾ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದರು. ಸುಮಲತಾ ಮಾತಿಗೆ ಇಂದು ತಿರುಗೇಟು ನೀಡಿರುವ ಪ್ರತಾಪ್ ಅಂಬರೀಶ್ ಸಿನಿಮಾದ ಪಾತ್ರದ ಹೆಸರೇಳಿ ತಿರುಗೇಟು ನೀಡಿದ್ದಾರೆ.