ನವದೆಹಲಿ:ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಇದನ್ನು ಖಂಡಿಸಿ ಖ್ಯಾತ ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕುಮ್ರಾ ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್ ಇದೀಗ ಕುನಾಗ್ ಸಂಕಷ್ಟ ತಂದೊಡ್ಡಿದೆ. ಈ ಟ್ವೀಟ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಕುನಾಲ್ ಕಮ್ರಾ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಅನುಮತಿ ನೀಡಿದ್ದಾರೆ.
ಏನಿದು ಘಟನೆ..?
ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಇತ್ತೀಚೆಗೆ ಮುಂಬೈ ಪೊಲೀಸರು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಸ್ವಾಮಿ ಅವರಿಗೆ ಜಾಮೀನು ನೀಡಲು ಮುಂಬೈ ಕೋರ್ಟ್ ನಿರಾಕರಿಸಿತ್ತು. ಆದರೆ, ಆರೋಪಿಯ ಮೇಲ್ಮನವಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಗೋಸ್ವಾಮಿ ಅವರಿಗೆ ಕೊನೆಗೂ ನಿನ್ನೆ ಜಾಮೀನು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ನ ಈ ಕಾರ್ಯವೈಖರಿಯನ್ನು ಖಂಡಿಸಿದ್ದ ಖ್ಯಾತ ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ಈ ಕುರಿತು ಟ್ವೀಟ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಕುನಾಲ್ ಕಮ್ರಾ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಅನುಮತಿ ನೀಡಿದ್ದಾರೆ. ಕುನಾಲ್ ಕಮ್ರಾ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಕುನಾಲ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
“ಕೋರ್ಟ್ನಲ್ಲಿ ʼಗೌರವಾನ್ವಿತʼ ಎಂಬ ಪದವನ್ನು ಇನ್ನು ಮುಂದೆ ಬಳಸಬಾರದು. ಏಕೆಂದರೆ ಗೌರವವು ಯಾವತ್ತೋ ಸುಪ್ರಿಂ ಕೋರ್ಟ್ ಕಟ್ಟಡ ಬಿಟ್ಟು ಹೊರ ಬಂದಿದೆ” ಹಾಗೂ “ಈ ದೇಶದ ಸುಪ್ರಿಂ ಕೋರ್ಟ್ ಅನ್ನುವುದು ಸುಪ್ರಿಂ ಜೋಕ್ ಆಗಿ ಮಾರ್ಪಾಡುಗೊಂಡಿದೆ” ಎಂಬ ಟ್ವೀಟ್ ಗಳನ್ನು ಉದಾಹರಣೆಯಾಗಿ ನೋಟೀಸ್ ನಲ್ಲಿ ನೀಡಲಾಗಿದೆ. ಇನ್ನು, ಸುಪ್ರಿಂ ಕೋರ್ಟ್ ನ ಕಟ್ಟಡಕ್ಕೆ ಸಂಪೂರ್ಣ ಕೇಸರಿ ಬಣ್ಣವನ್ನು ಬಳಿದು, ಭಾರತದ ಧ್ವಜವಿರುವ ಸ್ಥಳದಲ್ಲಿ ಬಿಜೆಪಿ ಪಕ್ಷದ ಧ್ವಜವನ್ನಿಟ್ಟಿರುವುದು ಸುಪ್ರಿಂ ಕೋರ್ಟ್ ಗೆ ಮಾಡಿದ ನಿಂದನೆಯಾಗಿದೆ ಎಂದು ಈ ನೋಟೀಸ್ ನಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಉಲ್ಲೇಖಿಸಿದ್ದಾರೆ.
ಟ್ವಿಟ್ಟರ್ನಲ್ಲಿ 17 ಲಕ್ಷ ಫಾಲೋವರ್ಸ್ ಹೊಂದಿರುವ ಕುನಾಲ್ ಕಮ್ರಾ ರವರು ಸುಪ್ರೀಂ ಕೋರ್ಟಿನ ಕಾರ್ಯವೈಖರಿಯನ್ನು ಅವರಹೇಳನ ಮಾಡುವ ನಾಲ್ಕು ಟ್ವೀಟ್ ಮಾಡಿದ್ದಾರೆ. ಅವರನ್ನು ಶಿಕ್ಷಿಸದಿದ್ದರೆ ಅವರ ಫಾಲೋವರ್ಸ್ ಕೂಡ ಸುಪ್ರೀಂ ಕೋರ್ಟಿಗೆ ಬೆಲೆ ನೀಡುವುದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.